ಸಕಲೇಶಪುರದ ತಾಲ್ಲೂಕಿನ ದೇವಾಲದಕೆರೆಯ ಸ.ಕಿ.ಪ್ರಾ ಪಾಠ ಶಾಲೆಯಲ್ಲಿ ಮಾಡು ಇಲ್ಲದ ಕಟ್ಟಡದ ಗೋಡೆ

0
528

May 20: ಸ.ಕಿ.ಪ್ರಾ ಪಾಠ ಶಾಲೆ ದೇವಾಲದಕೆರೆ, ಸಕಲೇಶಪುರ ತಾಲ್ಲೂಕು. ಇದು ನಾನು ಮತ್ತು ನನ್ನಂತಹ ಸಾವಿರಾರು ಜನ ಕಳೆದ 110 ವರ್ಷಗಳ ಹಿಂದಿನಿಂದ ಓದಿರುವ ಶಾಲೆ. ಒಂದಿಷ್ಟು ಶಿಥಿಲಾವಸ್ಥೆಗೆ ಹೋಗಿದ್ದರಿಂದ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಲು ಊರಿನ ಉತ್ಸಾಹಿ ಯುವಕರು ಯೋಚಿಸಿ ಸರ್ಕಾರಿ ನಿಯಮಗಳಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕೃತ ಒಪ್ಪಿಗೆ ಪಡೆದು, ಶಾಲೆಯ ಮೇಲ್ಛಾವಣಿ ಬಿಚ್ಚಿದ ನಂತರ ಅದೇ ಊರಿನ ಕೆಲವು ಪ್ರಭಾವಿಗಳು ಶಾಲೆಯ ಕಟ್ಟಡ ಸೇರಿದಂತೆ ಸುಮಾರು 10 ಗುಂಟೆ ಜಾಗವನ್ನು ನೂರಾರು ವರ್ಷಗಳ ಹಿಂದೆ ದಾನವಾಗಿ ನೀಡದ್ದನ್ನು ಈಗ ಹಿಂಪಡೆಯಲು ಪ್ರಯತ್ನ ನಡೆಸುತ್ತಿರುವುದು ದುರದೃಷ್ಟಕರ! ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೀನಾವೇಶ ತಾಳಿದೆ ಎಚ್ಚೆತ್ತುಕೊಂಡು ನ್ಯಾಯ ಒದಗಿಸಬೇಕಿದೆ.
ಮಲೆನಾಡಿನಲ್ಲಿ ಈಗಾಗಲೇ ಮುಂಗಾರು ಆರಂಭದ ಮುನ್ಸೂಚನೆ ಕಾಣುತ್ತಿದೆ. ಪ್ರತಿದಿನ ಮಳೆ ಸುರಿಯುತ್ತಿದೆ. ಮಾಡು ಇಲ್ಲದ ಕಟ್ಟಡದ ಗೋಡೆ ಮಳೆಯಲ್ಲಿ ತೇವವಾಗಿ ಕುಸಿಯುವ ಅಪಾಯ ಹೆಚ್ಚು. ಇಂತಹ ಸಮಯದಲ್ಲಿ ಅಧಿಕಾರಿಗಳು ಮುಂದೆ ನಿಂತು ಕೆಲಸ ಮಾಡಿಸಿ ಸರ್ಕಾರಿ ಸ್ವತ್ತನ್ನು ಕಾಪಾಡುವ ಹೊಣೆ ಇರುತ್ತದೆ. ಸಕಲೇಶಪುರ ತಾಲ್ಲೂಕಿನಲ್ಲಿ ಅಂತಹ ಜವಾಬ್ದಾರಿಯುತ ಅಧಿಕಾರಿಗಳ ಕೊರತೆ ಇದೆಯೇ! ಈ ವಿಚಾರವಾಗಿ ಶಿಕ್ಷಣ ಸಚಿವರಿಗೂ ದೂರು ನೀಡಿದೆ.
ಏನಾದರೂ ಆಗಲಿ ನಮ್ಮ ಜ್ಞಾನ ದೇಗುಲ ಹಾಳಾಗದಿರಲಿ. ಇನ್ನಾದರೂ ಅಧಿಕಾರಿಗಳು ಮುಂದೆ ಬಂದು ಸಮಸ್ಯೆ ಬಗೆಹರಿಸಿ. ಶತಮಾನೋತ್ಸವ ಆಚರಿಸಿರುವಂತಹ ಈ ಶಾಲೆಯ ವೈಭವವನ್ನು ಹೆಚ್ಚಿಸಲಿ.
ಕೃಪೆ ; ಈ ಶಾಲೆಯ ಹಳೆಯ ವಿದ್ಯಾರ್ಥಿ #ಅಚ್ಚನಹಳ್ಳಿಸುಚೇತನ

ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್
Mallikarjuna Raju,
Bureau Chief of Karnataka State, NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL.

LEAVE A REPLY

Please enter your comment!
Please enter your name here