ಸಾಲಗಾರರಿಗೆ ಬಿಗ್ ರಿಲೀಫ್

0
99

ಸಾಲಗಾರರಿಗೆ ಬಿಗ್ ರಿಲೀಫ್

ಆರ್ ಬಿ ಐ ಸುದ್ದಿಘೋಷ್ಠಿ:
ಜೀವನ ನಡೆಸಲು, ವ್ಯಾಪಾರರೀತ್ಯಾ ಅನೇಕ ಸಾಲಗಳು ಮಾಡಿ ಜೀವನ ನಡೆಸುತ್ತಿರುವ ಭಾರತ ದೇಶದ ಪ್ರಜೆಗಳು ಕೊರೋನಾ ವೈರಸ್ ಹಾವಳಿಯಿಂದ ಭಾರತ ಸರ್ಕಾರಧ 21 ದಿನಗಳ ಲಾಕ್ಡೌನ್ನಿಂದ ಕಂಗಾಲಾಗಿ ತಗೆದುಕೊಂಡ ಸಾಲಗಳನ್ನು ಹೇಗೆ ತೀರಿಸಬೇಕೆಂಬ ಚಿತಾಕ್ರಾಂತರಾಗಿರುವ ಈಗಿನ ಪರಿಸ್ಥಿತಿಯಲ್ಲಿ, ಆರ್ ಬಿ ಐ ಇಂದಿನ ಸುದ್ದಿಘೋಷ್ಠಿಯಲ್ಲಿ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಎಲ್ಲಾ ಸಾಲಗಳ ಈ ಎಂ ಐ 3 ತಿಂಗಳಕಾಲ ಮುಂದೂಡಿಕೆ ಮಾಡಿರುತ್ತಾರೆ.

ಗೋಲ್ಡ್ ಲೋನ್, ಫೈನಾನ್ಸಿಯಲ್ ಇನ್ಸ್ಟಿಟ್ಯೂಷನ್ಸ್, ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್ಗಳಿಗೆ ಈ ಆದೇಶ ಅನ್ವಯವಾಗಲಿದ್ದು ಎಲ್ಲಾ ಸಾಲದ 3 ತಿಂಗಳಕಾಲ ಈ ಎಂ ಐ ಮುಂದೂಡಿಕೆ
ಜನರ ಬಾಯಿಗೆ ಸಕ್ಕರೆ ಬಿದ್ದಂತಯೇ ಸರಿ ಮತ್ತು ಎಲ್ಲಾ ಬ್ಯಾಂಕ್ಗಳಲ್ಲಿ ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ, ಚಿನ್ನದ ಸಾಲ, ಕೃಷಿ ಸಾಲ ಸೇರಿದಂತೆ ಎಲ್ಲಾ
ಸಾಲಗಳು ತಗೆದುಕೊಂಡ ಜನರು ನಿಟ್ಟುಸಿರು ಬಿಡುವಂತಾಗಿದೆ ಹಾಗು ನೆಮ್ಮದಿಯಿಂದ ನಿದ್ದೆ ಮಾಡುವಂತಿದೆ.

Mallikarjuna Raju
Chief Bereau of Karnataka State
NAC NEWS CHANNEL.