National Anti Corruption News channel Mallikarjuna Raju Bureau chief Karnataka State.

0
592

ಹುಬ್ಬಳ್ಳಿ ಧಾರವಾಡ

ಪ್ರಹಲ್ಲಾದ್ ಜೋಶಿ – ಕೇಂದ್ರ ಮಂತ್ರಿಗಳು, ಜಗದೀಶ್ ಶೆಟ್ಟರ್ – ರಾಜ್ಯ ಮಂತ್ರಿಗಳು ಇವರ ಕ್ಷೇತ್ರವಾದ ಹುಬ್ಬಳ್ಳಿ ಧಾರವಾಡಕ್ಕೆ ಸಂಬಂದಿಸಿದ ಸುಮಾರು ಇಪ್ಪತೈದು ಜನರ ಕುಟುಂಬ ಹರಕೆಯ ನಿಮಿತ್ತ ಕಳೆದ ತಿಂಗಳು ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ತುಳಜಾಪುರ್ ಎಂಬ ಊರಿನಲ್ಲಿ ಇರುವ ಶ್ರೀ ತುಳಜಾ ಅಂಬಾ ಭವಾನಿ ದೇವಸ್ಥಾನಕ್ಕೆ  ಹೋಗಿದ್ದು ಅದೇ ಸಮಯಕ್ಕೆ ದೇಶ, ರಾಜ್ಯದೊಂದಿಗೆ ಈ ಕುಟುಂಬವು ಲಾಕ್ಡೌನ್ ಆಗಿತ್ತು. ತಮ್ಮ 
ಊರುಗಳಿಗೆ ಬರಲಾಗದೆ ಅಲ್ಲೇ ಸಿಕ್ಕಿಹಾಕೊಂಡಿರುವ ಸದರಿ ಕುಟುಂಬ ಸದ್ಯಕ್ಕೆ ತುಳಜಾಪುರದ ಲೋಹಿಯಾ ಮಂಗಲ್ ಕಾರ್ಯಾಲಯದ ಹತ್ತಿರವಿದ್ದು ಆನ್ಲೈನ್ ಮುಖೇನ ಅರ್ಜಿ ಸಹ ಸಲ್ಲಿಸಿರುತ್ತಾರೆ ಹಾಗು ಎಲ್ಲಾ ಕ್ವಾರಂಟೈನ್ ಪರೀಕ್ಷೆಗಳಿಗೊಳಪಟ್ಟು ನೆಗೆಟಿವ್ ರಿಪೋರ್ಟ್ ಬಂದಿರುತ್ತದೆ. ಅಲ್ಲಿನ ತಹಸೀಲ್ದಾರ್ ಅವರನ್ನು ಭೇಟಿ ಆಗಿ ವಿಚಾರಿಸಲಾಗಿ ಕರ್ನಾಟಕ ಸರ್ಕಾರದಿಂದ ಇನ್ನು ಹಸಿರು ನಿಶಾನೆ ಸಿಕ್ಕಿಲ್ಲ ಎಂಬ ಉತ್ತರ ಬಂದಿರುತ್ತದೆ ಎಂದು ತಿಳಿದುಬಂದಿದೆ. 

ಸದರಿ ವಿಚಾರವನ್ನು ಒಸ್ಮಾನಾಬಾದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹಾಗು ತುಳಜಾಪುರ್ ಪೊಲೀಸ್ ಇನ್ಸ್ಪೆಕ್ಟರ್ ಅವರ ಗಮನಕ್ಕೂ ತರಲಾಗಿ ಅವರು ನಿಮ್ಮ ರಾಜ್ಯದಿಂದ ಇನ್ನು ಅನುಮತಿ ಬಂದಿಲ್ಲ ಹಾಗಾಗಿ ನಮ್ಮ ಕೈಯಲ್ಲಿ ಏನು ಇಲ್ಲಾ ಅಂತ ಹೇಳುತ್ತಾರೆ. ಇವರಲ್ಲಿ ಮಕ್ಕಳು, ಹಿರಿಯ ನಾಗರಿಕರು ಸಹ ಇದ್ದಿದ್ದು ಸರಿಯಾದ ಊಟದ ಹಾಗು ನೀರಿನ ವ್ಯವಸ್ಥೆ ಇಲ್ಲದೆ 

ಗೋಳಾಡುಕೊಳ್ಳುತ್ತಿದ್ದಾರೆ ಮಾತ್ರವಲ್ಲದೆ ಇದರಿಂದ ನಮ್ಮ ಕುಟುಂಬದ ಯಾರಿಗೆ ಆಗಲಿ ಏನೆ ತೊಂದರೆ ಆದರೆ ಸರ್ಕಾರವೇ ಕಾರಣ ಅಂತ ಹೇಳುತ್ತಿದ್ದಾರೆ.

ಕೇಂದ್ರ ಮಂತ್ರಿಗಳಾದ ಪ್ರಹಲ್ಲಾದ್ ಜೋಶಿ,  ಮಂತ್ರಿಗಳಾಗಿರುವ ಜಗದೀಶ್ ಶೆಟ್ಟರ್ ಮತ್ತು ಧಾರವಾಡ ಜಿಲ್ಲೆಯ ಡಿ ಸಿ ಶ್ರೀಮತಿ ದೀಪಾ ಚೋಳನ್ ಅವರ ಗಮನಕ್ಕೂ ಸಹ ಸದರಿ ವಿಷಯವನ್ನು ತಿಳಿಸಲಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು 343 ಕಿಲೋಮೀಟರ್ಸ್ ದೂರದಲ್ಲಿ ಸಿಕ್ಕಿಹಾಕೊಂಡಿರುವ ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ಕ್ರಮವನ್ನು ತಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಈ ಕುಟುಂಬವು ಆಗ್ರಹಿಸುತ್ತದೆ 
ಅದೇ ನಮ್ಮ ಆಶಯ.

ಈ ಕುಟುಂಬವು ದಿನ ನಿತ್ಯದ ಆಹಾರ ಪದಾರ್ಥಗಳು, ನೀರು, ಇತರೆ ಕಾರ್ಯಗಳಿಗಾಗಿ ಪರದಾಡುತ್ತಿದ್ದು ಇವರಿಗೆ ಸಹಾಯ ಮಾಡಲಿಚ್ಛಿಸುವರು ಸಂಪರ್ಕಿಸಿ.

ತುಕಾರಾಮ್ +919886164745.  

Mallikarjuna Raju, 
Bureau Chief, Karnataka State, 
NAC NEWS CHANNEL.

Nalla Sanjeeva Reddy
Telangana State Bureau Chief & 
Incharge South India,
NAC NEWS CHANNEL. 

LEAVE A REPLY

Please enter your comment!
Please enter your name here