National Anti Corruption NEWS CHANNEL Mallikarjuna Raju Karnataka State Bureau Chief

0
448

ಇಂದಿನ ಜನಾಂಗಕ್ಕೆ ಸ್ಫೂರ್ತಿ ನೀಡಿಧ ನಿವೃತ್ತ ವಿಂಗ್ ಕಮಾಂಡರ್ ಹಾಗು ಸಾಮಾಜಿಕ ಹೋರಾಟಗಾರ ಜಿ.ಬಿ.ಅತ್ರಿ

ಬೆಂಗಳೂರು: ಸಾಮಾಜಿಕ ತಾಣಗಳನ್ನು ಗಮನಿಸಿದರೆ ಇಂದಿನ ಯುವತೆ ಪಯಣ ಎತ್ತ ಸಾಗುತ್ತಿದೆ ಎನ್ನುವ ಅನುಮಾನ ಬರುತ್ತದೆ. ಬರಿ ದ್ವೇಷ, ಆವೇಶ, ಅಹಂಕಾರ, ಕಾಮ, ಕ್ರೋಧ, ಲಾಭ, ಲೋಭಗಳ ಮಿಶ್ರಣದೊಂದಿಗೆ ತುಂಬಿ ತುಳುಕಾಡುತ್ತಾ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಆಗಿದೆ. ಇದಕ್ಕೆ ಕಾರಣಗಳೇನೆಂದು ನೋಡಿದಾಗ ಕಣ್ಣಿಗೆ ಗೋಚರಿಸುವುದು ಬರಿ ಹಕ್ಕುಗಳ ಬಗ್ಗೆ ಮಾತನಾಡಿ ಬೊಬ್ಬೆ ವಡಿಯುತ್ತಾ ಯಾರು ಸರಿ ಇಲ್ಲಾ ಹಾಗು ಸ್ವಚ್ಛತಾ ಅಭಿಯಾನ ಅಂದರೆ ಮೋದಿ ಅವರೊಬ್ಬರೇ ಇಡೀ ದೇಶವನ್ನು ಸ್ವಚ್ಛ ಗೊಳಿಸಲಿ ಎಂಬ ಮನೋಭಾವ ಬೆಳಸಿಕೊಂಡಿರುವುಧು.

ಹಕ್ಕುಗಳ ಬಗ್ಗೆ ಮಾತನಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ ಅದರಲ್ಲಿ ಎರಡನೇ ಮಾತಿಲ್ಲ ಹಾಗು ಹಕ್ಕುಗಳ ಕುರಿತು ನಮ್ಮ ಸಂವಿಧಾನದಲ್ಲಿ ಹೇಳಲಾಗಿದ್ದು ಈ ಕೆಳಕಂಡಂತಿದೆ.
ಭಾರತದ ಸಂವಿಧಾನವು ಡಿಸೆಂಬರ್ 9, 1947 ರಿಂದ ನವೆಂಬರ್ 26, 1949ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ 26, 1950ರಂದು ಜಾರಿಗೆ ಬಂದಿದ್ದು ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಬಲ, ಧರ್ಮದ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು ಮತ್ತು ಸಾಂವಿಧಾನಿಕ ಪರಿಹಾರಗಳ ಹಕ್ಕು ಎಂಬ ಭಾರತೀಯ ಸಂವಿಧಾನದಿಂದ ಮಾನ್ಯತೆ ಪಡೆದ ಆರು ಮೂಲಭೂತ ಹಕ್ಕುಗಳಿವೆ:
ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು – ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. * ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ.

ಮೂಲಭೂತ ಕರ್ತವ್ಯಗಳು
ಈ ಕರ್ತವ್ಯದ ವಿಧಿಯನ್ನು ನಂತರ – ಹಕ್ಕುಗಳ ಜೊತೆ ಸೇರಿಸಲಾಗಿದೆ. ಹಕ್ಕುಗಳ ಜೊತೆ ಕರ್ತವ್ಯವೂ ಜೊತೆಯಾಗಿಯೇ ಬರುತ್ತದೆ ಎಂದು ಭಾವಿಸಲಾಗಿದೆ.

ಸಂವಿಧಾನ ತಿದ್ದುಪಡಿ (42ನೇ) ಕಾಯ್ದೆ, 1976ರ ನಂತರ ಸಂವಿಧಾನದ 4ಎ ಭಾಗದಲ್ಲಿ ಪ್ರಜೆಗಳ ಹತ್ತು ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿತ್ತು. ಆದರೆ, ನಂತರ 86ನೇ ಸಂವಿಧಾನದ (ತಿದ್ದುಪಡಿ) ಮಸೂದೆ, 2002ರ ಮೇರೆಗೆ 11 ನೇ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ. ಅವುಗಳನ್ನು ಪಾಲಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅವುಗಳೆಂದರೆ:
1) ಸಂವಿಧಾನಕ್ಕೆ ನಿಷ್ಠೆ ತೋರಿಸುವುದು ಮತ್ತು ಅದರ ಆದರ್ಶಗಳನ್ನು ಹಾಗೂ ಸಂಸ್ಥೆಗಳನ್ನು ರಾಷ್ಟ್ರೀಯ ಧ್ವಜವನ್ನು ಮತ್ತು ರಾಷ್ಟ್ರ ಗೀತೆಯನ್ನು ಗೌರವಿಸುವುದು.
2) ಸ್ವಾತಂತ್ರ್ಯಕ್ಕಾಗಿ ರಾಷ್ಟೀಯ ಹೋರಾಟ ಮಾಡಲು ಪ್ರೇರಣೆ ನೀಡಿದ ಮಹಾನ್ ಆದರ್ಶಗಳನ್ನು ಪಾಲಿಸುವುದು.
3) ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದು ಮತ್ತು ರಕ್ಷಿಸುವುದು.
4) ದೇಶ ರಕ್ಷಣೆ ಮಾಡುವುದು ಹಾಗೂ ಕರೆ ಕೊಟ್ಟಾಗ ದೇಶ ರಕ್ಷಣೆಗೆ ಮುಂದಾಗುವುದು.
5) ಭಾಷೆ, ಧರ್ಮ ಮತ್ತು ಪ್ರಾದೇಶಿಕ ಅಥವಾ ವಿಭಾಗೀಯ ವಿಭಿನ್ನತೆಯನ್ನು ಮೀರಿ ಭಾರತದ ಎಲ್ಲಾ ಜನರೊಂದಿಗೆ ಸಾಮರಸ್ಯ ಮತ್ತು ಭಾತೃತ್ವದ ಹುರುಪನ್ನು ಹೆಚ್ಚಿಸುವುದು ಹಾಗೂ ಮಹಿಳೆಯರ ಪ್ರತಿಷ್ಠಗೆ ಭಂಗ ತರುವ ಆಚರಣೆಗಳನ್ನು ಕೈಬಿಡುವುದು.
6) ನಮ್ಮ ಸಮ್ಮಿಶ್ರ ಸಂಸ್ಕೃತಿಯ ಮೌಲ್ಯ ಮತ್ತು ಶ್ರೀಮಂತ ಪರಂಪರೆಯನ್ನು ರಕ್ಷಿಸುವುದು.
7) ಅರಣ್ಯ, ಸರೋವರಗಳು, ನದಿಗಳು ಮತ್ತು ವನ್ಯ ಪ್ರಾಣಿಗಳಿಂದ ಕೂಡಿರುವ ಪ್ರಾಕೃತಿಕ ಪರಿಸರವನ್ನು ರಕ್ಷಿಸಿ ಬೆಳವಣಿಗೆ ಮಾಡುವುದು ಹಾಗೂ ಜೀವಿಗಳ ಮೇಲೆ ದಯೆ ಹೊಂದಿರುವುದು.
8) ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಶೋಧನಾ ಹುರುಪು ಮತ್ತು ಸುಧಾರಣ ಭಾವನೆಯನ್ನು ಬೆಳಸುವುದು.
9) ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು.
10) ದೇಶವು ಸತತವಾಗಿ ಮೇಲ್ಮಟ್ಟದ ಪ್ರಯತ್ನ ಮತ್ತು ಸಾಧನೆಗೇರಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳ ಎಲ್ಲಾ ಕ್ಶೇತ್ರಗಳಲ್ಲೂ ಉತ್ಕೃಷ್ಟತೆಗಾಗಿ ಪ್ರಯತ್ನಿಸುವುದು.
11) 6 ರಿಂದ 14 ನೇ ವಯಸ್ಸಿನ ನಡುವಿನ ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವುದು[೩].
ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವುದು ಮಾತ್ರವಲ್ಲದೆ ಪ್ರತಿಯೊಬ್ಬ ಪ್ರಜೆ ತಮ್ಮ ಮೂಲಭೂತ ಕರ್ತವ್ಯಗಳನ್ನು ನೆರವೇರಿಸಿದಾಗ ಮಾತ್ರ ಸಮಾಜ ಉಳಿಯಲು ಸಾಧ್ಯ. ಇಂತಹ ಸನ್ನಿವೇಶದಲ್ಲಿ ನಿವೃತ್ತ ವಿಂಗ್ ಕಮಾಂಡರ್ ಹಾಗು ಸಾಮಾಜಿಕ ಹೋರಾಟಗಾರ ಜಿ.ಬಿ. ಅತ್ರಿ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಸಮೀಪದ ಸರಸ್ವತಿಪುರಂ ಬಡಾವಣೆಯಲ್ಲಿರುವ ತಮ್ಮ ಮನೆಯ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ, ಅದೇ ಬಡಾವಣೆಯ ರಸ್ತೆಯ ಪಕ್ಕದಲ್ಲಿ ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಬೆಂಚುಗಳನ್ನು ಹಾಕಿಕೊಡುಸುವುದರ ಮೂಲಕ, ವೃತ್ತಿಯಲ್ಲಿದ್ದಾಗ ಬಹಿರ್ಗತ ಬಯೋದ್ಪಾದಕೊರೊಂದಿಗೆ
ಯುದ್ಧ ಮಾಡಿ, ನಿವೃತ್ತರಾದನಂತರ ಸಮಾಜದಲ್ಲಿನ ಆಂತರಿಕ ಬಯೋದ್ಪಾದಕೊರೊಂದಿಗೆ ಯುದ್ಧ ಮಾಡುವುದು ಮಾತ್ರವಲ್ಲದೆ ಇತ್ತೀಚಿಗೆ ಕೋವಿಡ್19 ರೋಗವು ತಂದೊಡ್ಡಿರುವ ಸಂಕಷ್ಟದ ಸುಳಿಯಲ್ಲಿ ಜನಸಾಮಾನ್ಯರು ಸಿಲುಕಿದ ಪರಿಣಾಮವಾಗಿ ಉದ್ಯಾನವನಗಳಲ್ಲಿನ ಮೂಕ ಪ್ರಾಣಿಗಳ ಬದುಕೂ ತತ್ತರಿಸಿ, ಪರಿಸ್ಥಿತಿಯ ಹೊಡೆತಕ್ಕೊಳಗಾದ ಜೂ ಪ್ರಾಣಿಗಳ ಮೂಕ ವೇದನೆ ಗಮನಿಸಿದ ಅವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ೧೮ ತಿಂಗಳ ಜಿರಾಫೆ ಮರಿಯನ್ನು ದತ್ತು ಪಡೆದು ಕರ್ನಾಟಕದಲ್ಲೇ ಮೊದಲ ಬಾರಿ ಜಿರಾಫೆ ದತ್ತು ತೆಗೆದುಕೊಂಡ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ, ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತನ್ನ ನಿವೃತ್ತಿ ನಂತರ, ಸಾಮಾಜಿಕ ಕಳಕಳಿ ವಿಚಾರ ಹಾಗೂ ಹೋರಾಟ ಮೂಲಕ ಜನಸ್ನೇಹಿ ಬದುಕಿನತ್ತ ಒಲವು ತೋರಿದವರು. ಸಾಮಾಜಿಕ ಹಾಗು ಆರ್ಟಿಐ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಾ ಹಲವಾರು ಹೋರಾಟಗಾರರನ್ನು ರೂಪಿಸಿರುವ ಈ ನಿವೃತ್ತ ವಿಂಗ್ ಕಮಾಂಡರ್ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ. ಅಷ್ಟೇ ಅಲ್ಲ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಮಾಡಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತನ್ನ ಪಕೃತಿ ರಕ್ಷಣೆಯ ಕಾರ್ಯದಿಂದ ಬಹುಕೋಟಿ ಕಂಪನಿಗಳ ವಿರುದ್ಧ ಯುದ್ಧವನ್ನೇ ಮಾಡಿದ್ದಾರೆ.
ಪ್ರಕೃತಿ ಪ್ರೇಮಿಯಾಗಿ, ರಾಜ್ಯದ ಗಮನಸೆಳೆದಿದ್ದಾರೆ.

ಈ ಮೂಲಕ ಸಮಾಜದ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿ ತಾನು ಓರ್ವ ಜವಾಬ್ದಾರಿಯುತ ನಾಗರಿಕ ಅಂತ ತೋರಿಸಿಕೊಟ್ಟಿದ್ದಾರೆ ಮತ್ತು ಇಂದಿನ ಎಲ್ಲಾ ಜನಾಂಗಕ್ಕೆ ಪ್ರೇರಣೆ ನೀಡುವ ಮೂಲಕ ಐಕಾನ್ ಆಗಿದ್ದಾರೆ ಅಂದರೆ ಅತಿಶಯೋಕ್ತಿ ಅಲ್ಲ.

ಮಲ್ಲಿಕಾರ್ಜುನ ರಾಜು
ಕರ್ನಾಟಕ ಚೀಫ್ ಬ್ಯೂರೋ
ನಾಕ್ ನ್ಯೂಸ್ ಚಾನೆಲ್
Mallikarjuna Raju,
Karnataka State Bureau Chief
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL

LEAVE A REPLY

Please enter your comment!
Please enter your name here