National Anti Corruption NEWS CHANNEL Mallikarjuna Raju Karnataka State Bureau Chief

0
282

ನಿರ್ಜಲ ಏಕಾದಶಿ – ಜೂನ್‌ 2, 2020 ಮಂಗಳವಾರ

ಜ್ಯೇಷ್ಠ ಶುಕ್ಲ ಪಕ್ಷದ ಏಕಾದಶಿಯಂದು ನಿರ್ಜಲ ಏಕಾದಶಿಯನ್ನು ದೇಶದ ಹಲವೆಡೆ ಆಚರಿಸಲಾಗುತ್ತದೆ. ಪುರಾಣಗಳಲ್ಲೂ ಕೂಡ ಈ ಹಬ್ಬದ ಅಥವಾ ಈ ಪೂಜೆಯ ಮಹತ್ವವನ್ನು ಉಲ್ಲೇಖಿಸಲಾಗಿದೆ. ಒಂದು ವೇಳೆ ಯಾರಿಗಾದರೂ 24 ಏಕಾದಶಿಯನ್ನು ಮಾಡಲು ಸಾಧ್ಯವಾಗದೇ ಇದ್ದರೆ ಒಂದು ನಿರ್ಜಲ ಏಕಾದಶಿಯನ್ನು ಮಾಡಿದರೆ ಸಾಕಂತೆ. ಒಂದು ನಿರ್ಜಲ ಏಕಾದಶಿಯ ಆಚರಣೆಯು 24 ಏಕಾದಶಿ ಆಚರಣೆಗೆ ಸರಿಸಮವಾಗಿದೆ.

ಏಕಾದಶಿ ವ್ರತಗಳಲ್ಲಿ ನಿರ್ಜಲ ಏಕಾದಶಿಯು ಸರ್ವಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಇದು ನೀರನ್ನೂ, ಆಹಾರವನ್ನೂ ಸೇವಿಸದೇ ಮಹಾವಿಷ್ಣುವಿನ ಸಂಪ್ರೀತಿಗಾಗಿ ಮಾಡುವ ವ್ರತ. ಗರಿಷ್ಠ ಫಲ ನೀಡುವ ಏಕಾದಶಿ ವ್ರತ ಎಂದೂ ಪರಿಗಣಿಸಲಾಗುತ್ತದೆ.

ಚಾಂದ್ರಮಾನದ ಜೇಷ್ಠ ಮಾಸದ ಶುಕ್ಲಪಕ್ಷದ ಮೊದಲ ದಿನ ಬರುವುದೇ ನಿರ್ಜಲ ಏಕಾದಶಿ. ಇದು ಮಹಾವಿಷ್ಣುವಿನ ಸಂಪ್ರೀತಿಗಾಗಿ ಹಿಂದೂಗಳು ಆಚರಿಸುವ ಏಕಾದಶಿ. ಇದನ್ನು ಜ್ಯೇಷ್ಠ ಶುಕ್ಲ ಏಕಾದಶಿ ಎಂದೂ ಕರೆಯಲಾಗುತ್ತದೆ.

ಸಾಮಾನ್ಯವಾಗಿ ನಿರ್ಜಲ ಏಕಾದಶಿ ಬರುವುದು ‘ಗಂಗಾ ದಸರಾ’ದ ಬಳಿಕವಾದರೂ, ಕೆಲವೊಮ್ಮೆ ಒಂದೇ ದಿನ ಬರಲೂಬಹುದು. ನಿರ್ಜಲ ಏಕಾದಶಿಯು ಮನುಷ್ಯನ ಎಲ್ಲ ಪಾಪಗಳನ್ನೂ ತೊಳೆದು, ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗ ತೋರುತ್ತದೆ ಎಂಬುದು ಹಿಂದೂಗಳ ನಂಬಿಕೆ. ನಿರ್ಜಲ ಎಂದರೆ ನೀರಿಲ್ಲದ ಎಂದರ್ಥವಾಗಿದ್ದು, ಹೀಗಾಗಿ, ಇದನ್ನು ನೀರು ಮತ್ತು ಆಹಾರ ಸೇವಿಸದೆಯೇ ಆಚರಿಸಲಾಗುತ್ತದೆ.

ಪಾಲನೆ ವಿಧಾನ
ನಿರ್ಜಲ ಏಕಾದಶಿಯ ದಿನ ಭಕ್ತಾದಿಗಳು ಮಹಾವಿಷ್ಣುವನ್ನು ಪೂರ್ಣ ಭಕ್ತಿಯಿಂದ ಆರಾಧಿಸುತ್ತಾರೆ. ತುಳಸಿ ಪತ್ರೆ, ಹೂವು, ಹಣ್ಣು ಮತ್ತು ಸಿಹಿತಿನಸುಗಳನ್ನು ಮಹಾವಿಷ್ಣುವಿಗೆ ಸಮರ್ಪಿಸುತ್ತಾರೆ. ಅಲ್ಲದೆ ವಿಷ್ಣುವಿನ ದೇವಸ್ಥಾನವನ್ನೂ ಸಂದರ್ಶಿಸುತ್ತಾರೆ. ನಿರ್ಜಲ ಏಕಾದಶಿ ವ್ರತ ಆಚರಿಸುವ ವ್ಯಕ್ತಿಯು ರಾತ್ರಿಯಿಡೀ ಎಚ್ಚರದಿಂದಿದ್ದು, ಈ ಸಂದರ್ಭದಲ್ಲಿ ನಡೆಸಲಾಗುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.

ಈ ಸಂದರ್ಭದಲ್ಲಿ ವಿಷ್ಣು ಸಹಸ್ರನಾಮ ಮತ್ತು ಮಹಾವಿಷ್ಣುವಿಗೆ ಸಂಬಂಧಿಸಿದ ಇತರ ವೇದ ಮಂತ್ರಗಳ ಪಾರಾಯಣ ಮಾಡುವುದು ಫಲದಾಯಕ ಎನ್ನಲಾಗುತ್ತದೆ. ಈ ದಿನ ಅನ್ನ ಸೇವನೆ ವರ್ಜ್ಯ. ಬಟ್ಟೆ, ಆಹಾರ, ನೀರು ಮತ್ತಿತರ ಅಗತ್ಯ ವಸ್ತುಗಳನ್ನು ಬಡವರಿಗೆ ಹಾಗೂ ಅಪೇಕ್ಷಿತರಿಗೆ ದಾನ ಮಾಡುವುದರಿಂದ ಸತ್ಫಲ ದೊರೆಯುತ್ತದೆ.

ನಿರ್ಜಲ ಏಕಾದಶಿಯ ಮಹತ್ವ
ನಿರ್ಜಲ ಏಕಾದಶಿಯು ಅತ್ಯಂತ ಹೆಚ್ಚು ಫಲ ನೀಡುವ ಏಕಾದಶಿಗಳಲ್ಲೊಂದು ಎಂದು ಭಾವಿಸಲಾಗುತ್ತದೆ. ಇದರ ಆಚರಣೆಯಿಂದ ಅಭಿವೃದ್ಧಿ, ದೀರ್ಘಾಯುಸ್ಸು ಮತ್ತು ಮೋಕ್ಷದ ಹಾದಿ ಸುಗಮವಾಗುತ್ತದೆ ಎಂಬ ನಂಬಿಕೆ. ನಿರ್ಜಲ ಏಕಾದಶಿ ವ್ರತ ಆಚರಿಸುವವರಿಗೆ ಇತರ ಏಕಾದಶಿಗಳ ಸಂಯುಕ್ತ ಫಲವೂ ದೊರೆಯುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ, ಎಲ್ಲ 23 ಏಕಾದಶಿಗಳನ್ನೂ ಆಚರಿಸಲು ಕಷ್ಟವಾಗುವ ಭಕ್ತರು, ಎಲ್ಲ ಸತ್ಫಲಗಳನ್ನು ಪಡೆಯುವುದಕ್ಕಾಗಿ ನಿರ್ಜಲ ಏಕಾದಶಿ ಆಚರಿಸಬಹುದು ಎಂದು ಧರ್ಮಜ್ಞರು ಸಲಹೆ ನೀಡುತ್ತಾರೆ.

ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್
Mallikarjuna Raju,
Bureau Chief of Karnataka State,
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL

LEAVE A REPLY

Please enter your comment!
Please enter your name here