National Anti Corruption NEWS CHANNEL Mallikarjuna Raju Karnataka State Bureau Chief

0
269

ಬಿಜೆಪಿ ನಾಯಕನಿಗೆ
ಹಾಡು ಹಗಲೆ ಗುಂಡಿಕ್ಕಿ ಕೊಂದ ಹಂತಕರು

ದೇಶದಾದ್ಯಂತ ಸಾಧು ಸಂತರು
ಹಿಂದೂ ನಾಯಕರ, ಮೇಲಿಂದ ಮೇಲೆ ಹತ್ಯೆಯಾಗುತ್ತಿರುವಾಗ,
ಸರ್ಕಾರಿ ಮಟ್ಟದಲ್ಲಿ ಅದನ್ನು ತಡೆಯಲು ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ, ಇದು ಖೇದಕರವಾಗಿದೆ, ಹಾಗಾಗಿ ಕಾನೂನು ಮಾರ್ಗವಾಗಿ ಹಿಂದೂಗಳು ಸಂಘಟಿತರಾಗಿ ಧ್ವನಿ ಎತ್ತಬೇಕು.

ರಾಜಧಾನಿಯಂತಹ
ಬಿಗಿ ಭದ್ರತೆಯಲ್ಲಿರುವ ಸ್ಥಳದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಸರ್ಕಾರಿ ಸಂಸ್ಥೆಗಳಿಗೆ ಮತ್ತು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ. ಕಾನೂನು ಸುವ್ಯವಸ್ಥೆ ದೆಹಲಿಯಲ್ಲಿ ಎಷ್ಟು ಹದಗೆಟ್ಟಿದೆ ಎಂಬುದು ಗಮನಕ್ಕೆ ಬರುತ್ತದೆ.

ಬಿಜೆಪಿ ನಾಯಕ ರಾಹುಲ್ ಸಿಂಗ್ ಊರ್ಫ್ ಭೂರು ಸಿಂಗ್‌ನನ್ನು ಅಜ್ಞಾತರು
ಪೂರ್ವ ದೆಹಲಿಯ ಪಶ್ಚಿಮ ವಿನೋದನಗರದಲ್ಲಿ ಗುಂಡಿಕ್ಕಿ ಕೊಂದಿದ್ದರು.
ರಾಹುಲ್ ಸಿಂಗ್ ಅವರು ವಾಯುವಿಹಾರಕ್ಕಾಗಿ ಹೊರಟಿದ್ದಾಗ ಜೂನ್ ೩ ರ ಬೆಳಿಗ್ಗೆ ಮಯೂರ್ ಪಬ್ಲಿಕ್ ಸ್ಕೂಲ್ ಬಳಿ ಅಜ್ಞಾತರು ಅವರ ಮೇಲೆ ಆರು ಬಾರಿ ಗುಂಡುಗಳನ್ನು ಹಾರಿಸಿದ್ದಾರೆ.

ರಾಹುಲ್ ಸಿಂಗ್ ಮೇಲೆ
ಎಂಟು ತಿಂಗಳ ಹಿಂದೆಯೇ ಮಾರಣಾಂತಿಕ ಹಲ್ಲೆ ನಡೆದಿತ್ತು. ಅವರು ಆ ಸಮಯದಲ್ಲಿ ತಪ್ಪಿಸಿಕೊಂಡಿದ್ದರು. ರಾಹುಲ್ ಸಿಂಗ್ ಇವರ ಹತ್ಯೆ ಪರಸ್ಪರ ವಿವಾದದಿಂದಾಗಿ ಆಗಿದೆ ಎಂದು ಹೇಳಲಾಗುತ್ತಿದ್ಧು ಸದರಿ ಪ್ರಕರಣದಲ್ಲಿ ದೆಹಲಿ ಪೊಲೀಸರು ರಾಹುಲ್ ಅವರ ಶವವನ್ನು ಶವಪರೀಕ್ಷೆಗೆ ಕಳುಹಿಸಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್
Mallikarjuna Raju,
Bureau Chief of Karnataka State,
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL

LEAVE A REPLY

Please enter your comment!
Please enter your name here