National Anti Corruption NEWS CHANNEL Mallikarjuna Raju Karnataka State Bureau Chief

0
364

ಅಧ್ಯಕ್ಷ ಪದವಿಯನ್ನು ನಿಬಾಯಿಸಲು ಆಗದ ರಾಹುಲ್ ಗಾಂಧೀ ಅವರಂಥ ದಡ್ಡರೇನಲ್ಲ ಪ್ರಧಾನಿ ಮೋದಿ

ಲಡಾಕ್ ಬಳಿ ಇರುವ LAC ಉಲ್ಲಂಘನೆಯ ಕುರಿತು ಭಾರತ ಹಾಗೂ ಚೀನಾ ಸೈನಿಕರ ನಡುವೆ ಹಲವು ದಿನಗಳಿಂದ ಸಂಘರ್ಷ ನಡೆದಿದೆ. ನಿನ್ನೆ ಉಭಯ ದೇಶಗಳ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದ್ದು, ಈ ಘರ್ಷಣೆಯಲ್ಲಿ ಭಾರತೀಯ ಸೇನಾ ಅಧಿಕಾರಿ ಸೇರಿದಂತೆ ಸೇವಾಜವಾನರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಘರ್ಷಣೆಯಲ್ಲಿ ಚೀನಾದ ಜವಾನರೂ ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಭಾರತದ ಮೇಲೆ ಆರೋಪ ಮಾಡಿರುವ ಚೀನಾ, ಭಾರತೀಯ ಸೇನೆಯ ಜವಾನರು ಚೀನಾ ಗಡಿಯೊಳಗೆ ನುಗ್ಗಿ, ಚೀನಾ ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತ ಸೇನೆ, ಸದ್ಯ ಗಡಿಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ತಿಳಿಗೊಳಿಸಲು ಉಭಯ ದೇಶಗಳ ಸೇನಾಧಿಕಾರಿಗಳ ನಡುವೆ ದೀರ್ಘಕಾಲದಿಂದ ಮಾತುಕತೆ ಮುಂದುವರೆದಿದೆ ಎಂದು ಹೇಳಿದೆ. ಈ ಘರ್ಷಣೆಯಲ್ಲಿ ಭಾರತೀಯ ಸೇನೆಯ ಅಧಿಕಾರಿ ಹಾಗೂ ಜವಾನರು ಹುತಾತ್ಮರಾಗಿದ್ದಾರೆ ಎಂದು ಹೇಳಿದೆ.

ಈ ಕುರಿತು ಖಾಸಗಿ ಮಾಧ್ಯಮದಲ್ಲಿ ಸಂವಾದವಿದ್ದು ನಿವೃತ್ತ ವಿಂಗ್ ಕಮ್ಯಾಂಡರ್ ಜಿ ಬಿ ಅತ್ರಿ ಸೇರಿದಂತೆ ಹಲವಾರು ಜನ ಬಾಗವಹಿಸಿದ್ದು, ಸಂವಾದ ಮಧ್ಯೆಯಲ್ಲಿ ರಾಹುಲ್ ಗಾಂಧಿ “ಎಲ್ಲಿ ಅಡಗಿಕುಳಿತಿದ್ದಾರೆ ಮೋದಿ” ಎಂಬ ಟ್ವೀಟ್ ಮಾಡಿರುವ ಬಗ್ಗೆ ಕೇಳಿದಾಗ, ಪ್ರಧಾನಿ ಅವರಿಗೆ ಚೈನಾ ಮಾಡುತ್ತಿರುವ ಕುತಂತ್ರಗಳ ಬಗ್ಗೆ ಮತ್ತು ಚೈನಾದ ತಂತ್ರಗಾರಿಕೆ ಬಗ್ಗೆ ಚೆನ್ನಾಗಿ ಅರಿವಿದೆ ತಮ್ಮ ಅಧ್ಯಕ್ಷ ಪದವಿಯನ್ನು ನಿಬಾಯಿಸಲು ಆಗದ ರಾಹುಲ್ ಗಾಂಧೀ ಅವರಂಥ ದಡ್ಡರೇನಲ್ಲ ಮತ್ತು ಮೋದಿ ಅವರು ಸರಿಯಾದ ಕ್ರಮವನ್ನು ತಗೆದುಕೊಳ್ಳುತ್ತಾರೆ ಅನ್ನುವ ಮೂಲಕ ದೇಶದಲ್ಲಿರುವ ಡೊಂಗಿವಾದಿಗಳಿಗೆ ಛಡಿಯೇಟು ಕೊಟ್ಟಿದ್ದಾರೆ.

ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್
Mallikarjuna Raju,
Bureau Chief of Karnataka State,
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL.

LEAVE A REPLY

Please enter your comment!
Please enter your name here